Wednesday, March 3, 2010

devariddanaa?

ನನ್ನ ಅನಿಸಿಕೆಗಳನ್ನು ನಿಧಾನವಾಗಿ ನನ್ನದೇ ವೇಗದಲ್ಲಿ ಬರೆಯಲು ಪ್ರಾರಂಭ ಮಾಡುತ್ತಿದ್ದೇನೆ.ಪ್ರಾಥಮಿಕ ಹಂತದ ಶಾಲೆಗೇ ಹೋಗುತ್ತಿದ್ದಾಗ ಸತ್ಯದ ಹೊರತು ಸುಳ್ಳು ಎನ್ನುವುದು ಇದೆ ಎಂದೇ ಗೊತ್ತಿರಲಿಲ್ಲ.ಮೋಸ ವಂಚನೆ ಕೆಟ್ಟ ಮಾತುಗಳು ಯಾವುದು ಅರಿವಿರಲಿಲ್ಲ.ಪ್ರೌಢ ಶಾಲೆಗಾಗಿ ಪುತ್ತೂರಿನ ಬೋರ್ಡ್ ಹೈಸ್ಕ್ಕೂಲ್ ಮತ್ತು ಬ್ರಾಹ್ಮಣರ ಹಾಸ್ಟೆಲ್ಲಿಗೆ ಸೇರಿದಾಗಲಸ್ತೆ ಇವೆಲ್ಲದರ ಪರಿಚಯವಾಯ್ತು .ಅಲ್ಲಿಂದೀಚೆಗೆ ನನ್ನ ಪ್ರತಿಯೊಂದು ನಂಬಿಕೆಗಳೂ ಸಾಕಷ್ಟು ಬಾರಿ ಬದಲಾವಣೆ ಗೊಂಡಿವೆ .ಸಂಶಯಗಳ ಮೇಲೆ ಸಂಶಯಗಳು ಹುಟ್ಟುತ್ತಿವೆ .ಕೆಲವಕ್ಕೆ ಮಾತ್ರ ಉತ್ತರ ಸಿಕ್ಕರೆ ಇನ್ನು ಕೆಲವಕ್ಕೆ ಸಮಾಜ ಕೊಡುವ ಉತ್ತರಗಳನ್ನು ಒಪ್ಪಿಕೊಳ್ಳುವ ಮನಸ್ಸಾಗುತ್ತಿಲ್ಲ.
         ಇಂತಹದೆ ಗೊಂದಲ ನನ್ನಲ್ಲಿರುವುದು ದೇವರ ಬಗ್ಗೆ.ದೇವರಿದ್ದನಾ,ಇಲ್ಲವಾ?ತೀರಾ ಚಿಕ್ಕವನಿದ್ದಾಗ ದೇವರ ದೀಪಕ್ಕೆ ನಮಸ್ಕಾರ ಮಾಡುತ್ತಾ ದೇವರಿಗೆ ಸವಾಲು ಹಾಕುತ್ತಿದ್ದುದು ಇನ್ನೂ ನೆನಪಿದೆ.ನೀನೇನಾದರೂ ಇದ್ದರೆ ನಾಳೆ ನನ್ನೆದುರು ಬಾ.ಹೈಸ್ಕೂಲಿಗೆ ಬಂದ ಬಳಿಕ ಇಂತಹ ಚಿಂತನೆಗೆ ನಾಸ್ತಿಕವಾದವೆನ್ನುತ್ತಾರೆಂದು ತಿಳಿಯಿತು.ಇಂದಿಗೂ ಈ ಭಾವನೆ ಹಾಗೆಯೇ ಉಳಿದಿದೆ.
       ನನ್ನ ದ್ರಿಷ್ಟಿಯಲ್ಲಿ ನಾಲ್ಕು ವಿಧದ ಜನರಿದ್ದಾರೆ .ದೇವರಿದ್ದಾನೆಂದು ಹೇಳುತ್ತಾ,ಆದರೆ ದೇವರಿಲ್ಲವೆಂದು ನಂಬುವವರು.ಇವರುಗಳು ದೇವರ ಪೂಜೆ ಮಾಡುತ್ತಾರೆ,ಆದರೆ ನಿಜ ವ್ಯವಹಾರದಲ್ಲಿ ಮೋಸ ಧಾರಾಳವಾಗಿ ಮಾಡುತ್ತಾರೆ.ಇಂತಹ ಜನರೇ ಲೋಕದಲ್ಲಿ ಬಹುಸಂಖ್ಯಾತರು.ದೇವರಿದ್ದಾನೆಂದು ಹೇಳುತ್ತಾ ಅದನ್ನು ನಿಜವಾಗಿ ನಂಬುವವರು.ಇವರುಗಳು ಸಜ್ಜನರು,ಮೋಸ ವಂಚನೆ ಯಾರಿಗೂ ಮಾಡದವರು.ಇವರು ಅಲ್ಪಸಂಖ್ಯಾತರು.ದೇವರಿಲ್ಲವೆಂದು ಹೇಳುತ್ತಾ ಅದನ್ನು ನಂಬುವವರು.ಇವರುಗಳಲ್ಲಿ ಸಜ್ಜನರೂ ಇರಬಹುದು,ದುರ್ಜನರೂ ಇರಬಹುದು. ದೇವರಿಲ್ಲವೆಂದು ಹೇಳುತ್ತಾ ಅದನ್ನು ನಂಬದ ವರ್ಗ ಇನ್ನೊಂದು.ಇವರುಗಳು ಕದ್ದು ಮುಚ್ಚಿ ದೇವಸ್ತಾನಕ್ಕೆ ಹೋಗುತ್ತಾ ಪೂಜೆ ಸಲ್ಲಿಸುತ್ತಾರೆ.